ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಪೇಜ್ ಪ್ರಮುಖರ  ಬಿಜೆಪಿ ಸಮಾವೇಶ

ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಪೇಜ್ ಪ್ರಮುಖರ  ಬಿಜೆಪಿ ಸಮಾವೇಶ

Wed, 08 Feb 2023 22:44:30  Office Staff   SOnews

ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಪೇಜ್ ಪ್ರಮುಖರ  ಬಿಜೆಪಿ ಸಮಾವೇಶ

ಭಟ್ಕಳಕನ್ಯಾಕುಮಾರಿಯಿಂದ ಕಾಶ್ಮೀರದ  ವೆರೆಗೆ ಭಾರತವನ್ನು ಜೋಡಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಆದರೆ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಆರಂಭಿಸಿದ್ದು ಒಂದು ಹಾಸ್ಯಾಸ್ಪದ ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿದರು.

 ಅವರು ಸೋಮವಾರ ಶಿರಾಲಿ ಜನತಾ ವಿದ್ಯಾಲಯದಲ್ಲಿ ನಡೆದ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಪೇಜ್ ಪ್ರಮುಖರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕರಾವಳಿಯಲ್ಲಿ ಬಿಜೆಪಿ ಅರಳಿಸಲು ಪ್ರೇರಣೆ ನೀಡಿದ್ದು ಭಟ್ಕಳ ಕ್ಷೇತ್ರ. ಹಾಗಾಗಿ ಭಟ್ಕಳದಿಂದಲೇ ಪ್ರಥಮ ಬಿಜೆಪಿ ಸಮಾವೇಶ ನಡೆಸಿ ಕರಾವಳಿಯಲ್ಲಿ ಸಂಕಲ್ಪ ಯಾತ್ರೆ ಆರಂಭಿಸಲಾಗುವುದು ಎಂದರು. ಭಟ್ಕಳದಲ್ಲಿ ಶಾಂತಿ ನೆಲೆಯೂರಲು ಕಾಂಗ್ರೆಸ್ ತುಷ್ಟಿರಾಜಕಾರಣ ಅವಕಾಶ ಮಾಡಿಕೊಡುತ್ತೀಲ್ಲ. ಬಿಜೆಪಿ ಆಡಳಿತದಲ್ಲಿ ಕಂಡು ಕೇಳಯರಿದ ಅಭಿವೃದ್ದಿ ಆಗಿದೆ. ಭಟ್ಕಳ ಶಾಸಕರು 1300 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ದಿ ಮಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ನಾನು ಸವಾಲು ಹಾಕುತ್ತೇನೆ. ಅವರ ಆಡಳಿತದ 60 ವರ್ಷದಲ್ಲಿ ಭಟ್ಕಳಕ್ಕೆ ನೀಡದ ಅನುದಾನವನ್ನು ಬಿಜೆಪಿ ಮೂರು ವರ್ಷದಲ್ಲಿಯೇ ಭಟ್ಕಳಕ್ಕೆ ನೀಡಿ ಅಭಿವೃದ್ದಿ ಮಾಡಿದೆ ಎಂದರು. ದೇಶದಲ್ಲಿ ಪರಿವರ್ತನೆಯಾಗುತ್ತಿದೆ. ಪೇಜ್ ಪ್ರಮುಖರ ಸಹಾಯದಿಂದ ಬಿಜೆಪಿ ಗುಜರಾತಿನಲ್ಲಿ 7ನೇ ಬಾರಿಗೆ ಅಧಿಕಾರ ಹಿಡಿದಿದೆ. ರಾಜ್ಯದಲ್ಲೂ ಅದೇ ಮಾದರಿ ಅನುಸರಿಸಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮೂರು ತುಂಡುಗಳಾಗಿವೆ, ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ ಅವರಿಂದ ರಾಜ್ಯ ಕಾರ್ಯಕಾರಣಿ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ನಲ್ಲಿ ಕೆಲಸ ಮಾಡಲು ಕಾರ್ಯಕರ್ತರ ತಂಡ ಇಲ್ಲ ಎಂದು ವ್ಯಂಗ್ಯವಾಡಿದರು. ರಾಜ್ಯ ಪ್ರವಾಸ ಮಾಡುತ್ತೀರುವ ಕುಮಾರಸ್ವಾಮಿ ಅವರಿಗೆ ಭಟ್ಕಳದಲ್ಲಿ ಒಂದು ಬೂತ್ ಸಮಾವೇಶ ನಡೆಸುವ ಸಾಮರ್ಥ್ಯ ಕೂಡ ಇಲ್ಲ ಎಂದು ಟೀಕಿಸಿದರು

ಇದು ಟಿಪ್ಪೂ ಸಾರ್ವಕರ್ ನಡುವಿನ ವಿಚಾರಗಳ ಚುನಾವಣೆ: ರಾಜ್ಯದಲ್ಲಿ ಈ ನಡೆಯುವ ಚುನವಣೆ ಪಕ್ಷ ಪಕ್ಷಗಳ ನಡುವೆ ನಡೆಯುವ ಚುನಾವಣೆಯಾಗದೆ, ಟಿಪ್ಪೂ ಹಾಗೂ ಸಾವರ‍್ಕರ್ ನಡುವಿನ ಸಿದ್ದಾಂತಗಳ ಹೋರಾಟವಾಗಿದೆ . ನಿಮಗೆ ಟಿಪ್ಪೂ ಬೇಕಾ? ಸಾರ್ವಕರ್ ಬೇಕಾ? ಎಂದು ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಟಿಪ್ಪೂ ಜಯಂತಿಯೊಂದಿಗೆ ಹಿಂದೂ-ಮುಸ್ಲಿಮರನ್ನು ಒಡೆದಿರುವ ಸಿದ್ದರಾಮಯ್ಯ ವೀರಶೈವ -ಲಿಂಗಾಯತ್ ಹೆಸರಲ್ಲಿ ಹಿಂದೂ ಸಮಾಜ ಒಡೆಯುತ್ತಿದ್ದಾರೆ. ಮತ್ತೊಂದೆಡೆ ರಾಜ್ಯ ಮಾಜಿ ಮುಖ್ಯಮಂತ್ರಿಯಾಗಿರುವ ಕುಮಾರ್ ಸ್ವಾಮಿ ಬ್ರಾಹ್ಮಣ ಸಮಾಜ ಅವಮಾನಿಸುವುದರ ಮೂಲಕ ಬ್ರಾಹ್ಮಣ ಸಮಾಜವನ್ನು ಒಡೆಯುತ್ತಿದ್ದಾರೆ. ಹಿಂದೂ ಧರ್ಮ ಮತ್ತು ಹಿಂದೂ ಎರಡೂ ಒಂದೆ ಆಗಿದ್ದು ಎರಡಲ್ಲಿ ಯಾವುದೇ ಭಿನ್ನತ್ವ ಇಲ್ಲ ಎಂದೂ ಹೇಳಿದರು.

 ಕಾಂಗ್ರೆಸ್ ಬ್ರಷ್ಟಚಾರದ ಬಗ್ಗೆ ಮಾತನಾಡುತ್ತಿದೆ. ಆದರೆ ಕಾಂಗ್ರೆಸ್ ನಾಯಕರೇ ಹಲವು ಹಗರಣದಲ್ಲಿ ಸಿಲುಕಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಸಿದ್ದರಾಮಯ್ಯ ಆಪ್ತ ಕೆಂಪಯ್ಯ ಸಿಕ್ಕಿಬಿದಿದ್ದಾರೆ. ಸಿದ್ದರಾಮಯ್ ಜೈಲಿಗೆ ಹೋಗುವ ದಿನ ದೂರ ಇಲ್ಲ ಎಂದರು.

 ಶಾಸಕ ಸುನೀಲ ನಾಯ್ಕ ಮಾತನಾಡಿ ತಾಲ್ಲೂಕಿನಲ್ಲಿ ಮಾಡಿರುವ ಅಭಿವೃದ್ದಿ ಕೆಲಸದ ಬಗ್ಗೆ ತಿಳಿಸಿದರು. ರಾಜ್ಯ ಬಿಜೆಪಿ ಘಟಕ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಜಿಲ್ಲಾ ಘಟಕ ಅಧ್ಯಕ್ಷ ವೆಂಕಟೇಶ ನಾಯಕ, ಜಿಲ್ಲಾ ಪ್ರಮುಖರಾದ ಭಾರತಿ ಜಂಬೆ, ಎನ್.ಎಸ್ ಹೆಗಡೆ, ಪ್ರಸನ್ನ ಕೆರಕೆ, ಚಂದ್ರ ಎಸಳೆ, ಗುರುಪ್ರಸಾದ ಹೆಗಡೆ, ರವಿ ನಾಯ್ಕ, ಸುಬ್ರಾಯ ದೇವಾಡಿಗ, ರಾಜೇಶ ಭಂಡಾರಿ ಇದ್ದರು.

 


Share: